ರೊಜಾರಿಯೊ ಸಮೂಹ ವಿದ್ಯಾಸಂಸ್ಥೆಯಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಿಕೊಳ್ಳಲಾಯಿತು.ವಿದ್ಯಾರ್ಥಿಗಳು ಧ್ಯಾನ ಪ್ರಾರ್ಥನೆಯೊಂದಿಗೆ ಯೋಗಭ್ಯಾಸದಲ್ಲಿ ತಮ್ಮನ್ನು ತೊಡಗಿಸಿಕೊಂಡರು.ದೈಹಿಕ ವ್ಯಾಯಾಮದೊಂದಿಗೆ ವಿವಿಧ ಯೋಗಾಸನ ಭಂಗಿಯನ್ನು ವಿದ್ಯಾರ್ಥಿಗಳು ದೈಹಿಕ ಶಿಕ್ಷಕರ ಮಾರ್ಗದರ್ಶನದಲ್ಲಿ ಪ್ರಸ್ತುತಪಡಿಸಿದರು.ನಂತರ ಅಂತರರಾಷ್ಟ್ರೀಯ ಯೋಗಾಸನ ದಿನದ ಮಹತ್ವವನ್ನು ತಿಳಿಸುತ್ತಾ ಕಾರ್ಯಕ್ರಮವನ್ನು ಮುಕ್ತಾಯ ಮಾಡಲಾಯಿತು.ಕಾರ್ಯಕ್ರಮದಲ್ಲಿದೈಹಿಕ ಶಿಕ್ಷಣ ಶಿಕ್ಷಕ ಶ್ರೀ ಕಾರ್ತಿಕ್. ಕೆ. ಎಲ್ಲಾ ಶಿಕ್ಷಕರು ಹಾಗೂ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಆಲಿಸ್ ಕೆ.ಜೆ ಉಪಸ್ಥಿತರಿದ್ದರು.